Srinidhi Ramachandra
Saturday, 15 November 2025
Mysore — The Fairy Tale I Walked Into
Wednesday, 29 May 2024
ಕುಮಾರವ್ಯಾಸ ಭಾರತ - ಉದ್ಯೋಗಪರ್ವ
ಪೀಠಿಕೆ
ಇಲ್ಲಿ ಆಶ್ರಯಿಸಿರುವ ಕುಮಾರವ್ಯಾಸಭಾರತದ ಪಾಠವು ಹಿಂದೆ ಅಚ್ಚಾದ ಪೇಟೆಮುದ್ರಣದ ಪಾಠವಾಗಿದೆ. ಇದಕ್ಕೆ ಶಕಟರೇಫವನ್ನು ಅಳವಡಿಸಲಾಗಿದೆ. ಅಚ್ಚಿನ ತಪ್ಪುಗಳನ್ನು ತಿದ್ದಲಾಗಿದೆ. ಛಂದಸ್ಸಿನ ದೋಷವಿದ್ದಲ್ಲಿ ಸರಿಪಡಿಸಲಾಗಿದೆ. ಪಾಠವು ಕೆಟ್ಟಿದ್ದಲ್ಲಿ ಓರಿಯಂಟಲ್ ಲೈಬ್ರರಿಯ ಪುಸ್ತಕಪಾಠವನ್ನು ಬಳಸಲಾಗಿದೆ.
- ಶ್ರೀನಿಧಿ ರಾಮಚಂದ್ರ
ಶ್ರೀಮತ್ಕುಮಾರವ್ಯಾಸಯೋಗೀಂದ್ರವಿರಚಿತಮಪ್ಪ
ಕರ್ಣಾಟಭಾರತಕಥಾಮಂಜರಿಯೊಳ್
ಉದ್ಯೋಗಪರ್ವಂ
ಮೊದಲನೆಯ ಸಂಧಿ
ಸೂ. ನಂಬಿದವರಿಗೆ ತನ್ನ ತೆತ್ತಿಹ
ನೆಂಬ ಬಿರುದನು ಮೆಱೆದು ಭಕ್ತ ಕು
ಟುಂಬಿ ಸಾರಥಿಯಾದನೊಲಿದರ್ಜುನಗೆ ಮುರವೈರಿ
ಕೇಳು ಜನಮೇಜಯ ಧರಿತ್ರೀ
ಪಾಲ ಕುಂತೀತನಯರುನ್ನತ
ದೇಳಿಗೆಯನೇನೆಂಬೆನೈ ಕಾರುಣ್ಯಸಿಂಧುವಲ
ಶ್ರೀಲತಾಂಗಿಯ ರಮಣನಿನಿಬರೊ
ಳಾಳೊಡೆಯನೆಂದೆಂಬ ಭೇದವ
ಬೀಳುಕೊಟ್ಟೇ ನಡೆಸುತಿರ್ದನು ತನ್ನ ಮೈದುನರ ೧
ಹೋಲಿಕೆಗೆ ಬಾಯಾರಿ ವೇದದ
ತಾಳಿಗೆಗಳೊಣಗಿದವು ಘನತೆಯ
ಮೇಲೆ ತನ್ನದು ಘನತೆಯೆಂಬುದನತ್ತ ಬೇಱಿರಿಸಿ
ಕಾಲಿಗೆಱಗುವನಾ ಯುಧಿಷ್ಠಿರ
ನೇಳಲೊಡನೇಳುವನು ಕೃಷ್ಣನ
ಲೀಲೆಯನುಪಮವೆಂದು ವೈಶಂಪಾಯಮುನಿ ನುಡಿದ ೨
ಒಂದು ದಿನ ವೊಡ್ಡೋಲಗಕ್ಕೈ
ತಂದನಖಿಳಾವನಿಯ ರಾಯರ
ಮಂದಿಯಲಿ ಮುರವೈರಿ ನುಡಿದನು ರಾಜಮಂತ್ರವನು
ಹಿಂದೆ ಜೂಜಿನ ವಿಲಗದಲಿ ಮನ
ನೊಂದರಿವರಡವಿಯಲಿ ಧರೆಗಿ
ನ್ನೆಂದು ಸೇರುವದೇನು ಹದನೀ ಪಾಂಡುತನಯರಿಗೆ ೩
ದೇವ ನೀನೇ ಬಲ್ಲೆ ನಿಮ್ಮಯ
ಭಾವನೀ ಧರ್ಮಜನ ಬಹುಮಾ
ನಾವಮಾನದ ಹೊಱಿಗೆ ನಿನ್ನದು ಹರಣಭರಣವನು
ನೀವು ಬಲ್ಲಿರಿ ಕಾಲಲೊದೆದುದ
ನೋವಿ ತಲೆಯಲಿ ಹೊತ್ತು ನಡೆಸುವ
ಡಾವು ಬಲ್ಲೆವು ಜೀಯಯೆಂದನು ದ್ರುಪದಭೂಪಾಲ ೪
ಕಳುಹುವುದು ಶಿಷ್ಟರನು ಧರಣೀ
ತಳವ ಬೇಡಿಸುವಲ್ಲಿ ಸಾಮವ
ಬಳಸುವುದು ಭೀಷ್ಮಾದಿಗಳಿಗಟ್ಟುವುದು ವಿನಯದಲಿ
ತಿಳಿವುದಾತನ ನೆಲೆಯನಲ್ಲಿಂ
ಬಳಿಕ ನಯವಿಲ್ಲೆಂದಡಾಹವ
ದೊಳಗೆ ಕೈದೋರುವುದು ಮತೆವೆಂದನು ಮುರಧ್ವಂಸಿ ೫
ಎಲೆ ಮರುಳೆ ಮುರವೈರಿ ಕೌರವ
ರೊಲಿಯರೀ ಹದನನು ಯುಧಿಷ್ಠಿರ
ನಿಳೆಯ ಸೋತನು ಜೂಜುಗಾಱರ ಮೇರೆ ಮಾರ್ಗದಲಿ
ನೆಲನನೊಡ್ಡಲಿ ಮತ್ತೆ ಗೆಲಿದೇ
ಕೊಳಲಿ ಮೇಣ್ ಕಾದಲಿ ಸುಯೋಧನ
ನೊಳಗೆ ತಪ್ಪಿಲ್ಲೆಂದು ನುಡಿದನು ನಗುತ ಬಲರಾಮ ೬
ಲೇಸನಾಡಿದೆ ರಾಮ ಬಳಿಕೇ
ನಾ ಸುಯೋಧನನಧಮನೇ ನೀ
ನೀಸನೇರಿಸಿಕೊಂಡು ನುಡಿವಾ ಮತ್ತೆ ಕೆಲಬರಲಿ
ಆಸುರದ ಕತ್ತಲೆಯ ಬೀಡು ಮ
ಹಾ ಸಹಾಯವು ಗೂಗೆಗಳಿಗುಪ
ಹಾಸವೇ ದಿಟವೆಂದು ಸಾತ್ಯಕಿ ನಗುತ ಖತಿಗೊಂಡ ೭
ಬಲನ ಮಾತೇನಿವರ ಭಾಗ್ಯದ
ನೆಲೆಯೆ ಫಡ ಕೌರವರ ಶತಕದ
ತಲೆಗೆ ತಾ ವೀಳೆಯವನೆಲೆ ಕುಂತೀಕುಮಾರಕನೆ
ನೆಲನನಲಗಿನ ಮೊನೆಯಲಲ್ಲದೆ
ಮೆಲುನುಡಿಯ ಸಾಮದಲಿ ಗೀಮದ
ಲಿಳೆಯ ಕೊಂಬಲೆ ಧರೆಯೊಳಧಿಕ ಕ್ಷತ್ರಿಯಾತ್ಮಜರು ೮
ಕಾದಿ ಸಾವುದು ಮೇಣು ರಿಪು ಭಟ
ನಾದವನ ನೆತ್ತಿಯಲಿ ಸಬಳವ
ಕೋದು ಕೊಂಬುದು ನೆಲನನಿದು ಕ್ಷತ್ರಿಯರ ಮಕ್ಕಳಿಗೆ
ಮೇದಿನಿಯ ಬೇಡುವೊಡೆ ಮಟ್ಟಿಯ
ತೇದು ಹಣೆಯಲಿ ಬಡಿದು ದರ್ಭೆಯ
ಕೋದು ಸ್ವಸ್ತಿಯ ಹಾಕುವುದು ಹಾರುವರ ಮಕ್ಕಳಿಗೆ ೯
ಎನಲು ನಕ್ಕನು ದ್ರುಪದನಿದು ನ
ಮ್ಮನುಮತವು ಕಾಳಗದೊಳಲಗಿನ
ಮೊನೆಯೊಳಲ್ಲದೆ ಮಹಿಯ ಕೊಡುವರೆ ಕೌರವೇಶ್ವರರು
ವಿನುತ ಸಾತ್ಯಕಿ ಕೇಳು ನೆಲೆಯಿದು
ಜನಪನಲ್ಲಿಗೆ ವೊಬ್ಬ ದೂತನ
ವಿನಯದಲಿ ಕಳುಹುವುದು ಸಾಮವ ಬೆಳೆಸಿ ನೋಡುವುದು ೧೦
ವಿಹಿತವಿದು ಪಾಂಚಾಲಕನ ಮತ
ವಹುದು ರಾಯರಿಗಟ್ಟುವುದು ವಿ
ಗ್ರಹವ ಸೂಚಿಸಿ ಕರೆದುಕೊಂಬುದು ಬೇಹ ಭೂಭುಜರ
ಬಹಳ ಸಂವರಣೆಯಲಿ ರಣ ಸ
ನ್ನಿಹಿತವಾಗಿಹುದಿತ್ತಲತ್ತಲು
ಮಹಿಯ ಬೇಡಿಸ ಕಳುಹುವುದು ತೆರನೆಂದನಸುರಾರಿ ೧೧
ಮದುವೆಗೋಸುಗ ಬಂದೆವಾವಿ
ನ್ನಿದರ ಮೇಲಣ ರಾಜಕಜಾರ್ಯದ
ಹದನನಟ್ಟುವುದಱುಹುವುದು ಬಹೆವಾವು ಕರೆಸಿದೊಡೆ
ಹದುಳವಿಹುದೆಂದಸುರರಿಪು ಕರು
ಣದಲಿ ಕುಂತೀಸುತರನಾ ದ್ರೌ
ಪದಿಯನಭಿಮನ್ಯುವ ಸುಭದ್ರೆಯ ಹರಸಿ ಬೀಳ್ಕೊಂಡ ೧೨
ಕೂಡಿಕೊಂಡಿಹುದಿವರ ಮಕ್ಕಳ
ನೋಡಲಾಗದು ಹೆಚ್ಚು ಕುಂದನು
ನಾಡ ಬೇಡಲು ಬುದ್ಧಿವಂತರನಲ್ಲಿಗಟ್ಟುವುದು
ಕೂಡೆ ಶೋಧಿಸಿ ಸೆಜ್ಜೆಯಲಿ ಮೈ
ಗೂಡಿಯಾರೋಗಣೆಗಳಲಿ ಕೈ
ಮಾಡಿ ಬೆರೆಸಿಹುದೆಂದು ದ್ರುಪದ ವಿರಾಟರಿಗೆ ನುಡಿದ ೧೩
ಎಂದು ಕಳುಹಿಸಿಕೊಂಡು ನಾರೀ
ವೃಂದ ಯದುಕುಲ ಸಹಿತ ದೇವ ಮು
ಕುಂದ ಬಿಜಯಂಗೈದು ಹೊಕ್ಕನು ದ್ವಾರಕಾಪುರವ
ಒಂದು ದಿನದಾಲೋಚನೆಯ ನೆಲೆ
ಯಿಂದ ಕರೆದು ಪುರೋಹಿತನ ನಲ
ವಿಂದ ಕಳುಹಿದ ದ್ರುಪದನಾ ಕೌರವನ ಪಟ್ಟಣಕೆ ೧೪
ಓಲೆಯುಡುಗೊಱೆ ಸಹಿತ ಧರಣೀ
ಪಾಲರಿಗೆ ಪಾಂಡವರು ಶಿಷ್ಟರು
ಕಾಳಗಕೆ ನೆರವಾಗಲೋಸುಗ ಕರೆದರಲ್ಲಲ್ಲಿ
ಆಳು ಕುದುರೆಯ ಕೂಡಿ ದೆಸೆಗಳ
ಮೂಲೆಯರಸುಗಳೆಲ್ಲ ಕುರು ಭೂ
ಪಾಲನಲ್ಲಿಗೆ ಕೆಲರು ಕೆಲಬರು ಪಾಂಡು ತನಯರಿಗೆ ೧೫
ಧರಣಿಯೆಡೆಗೆಡೆ ರಾಯ ಮೋಹರ
ತೆರಳಿತಿಬ್ಬರು ರಾಯರಿಗೆ ಕೈ
ನೆರವುದೋಱಲು ಕವಿದು ಬಂದುದು ಕಾಣೆನಳತೆಗಳ
ಅರಿಗಳತಿ ಹೆಚ್ಚಿದರು ಮೈಮರೆ
ದಿರಲು ಧರಣಿಗಮಾನ್ಯವಹುದಿ
ನ್ನುರುವಣಿಸಬೇಕೆಂದು ದುರ್ಯೋಧನನು ಚಿಂತಿಸಿದ ೧೬
ಹದನನಾಪ್ತರಿಗಱುಹಿದನು ಗು
ಪ್ತದಲಿ ಕೃಷ್ಣನನೊಳಗು ಮಾಡುವ
ಮುದದಿ ಬಂದನು ಕೌರವೇಂದ್ರನು ದ್ವಾರಕಾಪುರಿಗೆ
ಇದನು ಭೇದಿಸಿ ಬೇಹಿನವರಱು
ಹಿದರು ಕುಂತೀ ಸುತರಿಗತಿ ವೇ
ಗದಲಿ ಧರ‍್ಮಜನಳುಕಿ ಕಳುಹಿದನಿಂದ್ರನಂದನನ ೧೭
ಬೀಳುಕೊಂಡರ್ಜುನನು ಲಕ್ಷ್ಮೀ
ಲೋಲನಲ್ಲಿಗೆ ಬರುತ ಕಂಡನು
ಲೀಲೆಯಲಿ ನರ್ತಿಸುವ ನವಿಲನು ಬನದೊಳಡಹಾಯ್ದು
ಮೇಲೆ ಹಂಗನ ಬಲನ ಹರಿಣೀ
ಜಾಲದೆಡನನು ತಿದ್ದುವಳಿಯ ವಿ
ಶಾಲ ಶಕುನವನಾಲಿಸುತ ಹರುಷದಲಿ ನಡೆತಂದ ೧೮
ಮೊರೆದು ಮಿಗೆ ತಲೆಯೊತ್ತಿ ತೆರೆ ಮೈ
ಮುರಿದು ಘುಳುಘುಳು ಘುಳಿತ ಘನ ನಿ
ಷ್ಠುರ ನಿನಾದದ ಗಜಱು ಗಾಢಿಸಿ ಬಹಳ ಲಹರಿಯಲಿ
ತೆರೆ ತೆರೆಯ ತಿವಿದೆದ್ದು ಗಗನವ
ನಿರದೊದೆದು ವಿತಳಕ್ಕೆ ಸುಳಿ ಭೋಂ
ಕರಿಸಿ ಸಾಗರನುಬ್ಬುಗವಳವ ಕೊಂಡವೊಲು ಕುಣಿದ ೧೯
ಪೂತು ಮಝ ಸಾಗರನ ಬಿಗುಹು ಮ
ಹಾತಿಶಯವೈ ಯಿವನನಂಜಿಸ
ಲಾತಗಳು ಮರ್ಮಿಗಳು ಬೆಟ್ಟವನೊಟ್ಟಿ ನೆತ್ತಿಯಲಿ
ಈತ ನಮಗಂಜುವನೆಯೆನುತ ವಿ
ಧೂತರಿಪುಬಲ ಮುಂದೆ ಕಂಡನು
ಪಾತಕದ ಹೆಡತಲೆಯ ದಡಿಯನು ದ್ವಾರಕಾಪುರವ ೨೦
ಅಟ್ಟಿ ಬಳಲಿದ ಶ್ರುತಿಗೆ ಹರಿ ಮೈ
ಗೊಟ್ಟ ಠಾವಿದು ತಾಪಸರು ಜಪ
ಗುಟ್ಟಿ ಜಿನುಗಿದಡವರನುಜ್ಜೀವಿಸಿದ ಠಾವಿದಲ
ಹುಟ್ಟು ಸಾವಿನ ವಿಲಗ ಜೀವರ
ಬಿಟ್ಟ ಠಾವಿದು ಕಾಲ ಕರ್ಮದ
ಥಟ್ಟು ಮುಱಿವಡೆದೋಡಿದೆಡೆಯಿದು ಶಿವ ಶಿವಾಯೆಂದ ೨೧
ಪರಮ ನಾರಾಯಣ ಪರಾಯಣ
ನಿರವೆ ಪರತರವೆಂದು ಮುರಹರ
ಬರೆದ ಠಾವಿದು ಮುಕುತಿಯಿದಱೊಳು ಕರತಳಾಮಲಕ
ಭರಿತ ಬೊಮ್ಮದ ಸುತ್ತುಗೊಳಸನು
ಸರಿದ ಠಾವೀ ತರ್ಕ ತಂತ್ರದ
ತರದ ಯುಕುತಿಗೆ ತೊಳಸುಗೊಳ್ಳದ ಠಾವಲಾಯೆಂದ ೨೨
ಹೊಗಳುತರ್ಜುನನಸುರರಿಪುವಿನ
ನಗರಿಗೈತಂದರಮನೆಯ ಹೊಗ
ಲಗಧರನು ಮಂಚದಲಿ ನಿದ್ರಾಂಗನೆಯ ಕೇಳಿಯಲಿ
ಸೊಗಸು ಮಿಗಲರೆದೆಱೆದ ಲೋಚನ
ಯುಗಳ ಸಮತಳಿಸಿದ ಸಷುಪ್ತಿಯ
ಬಿಗುಹಿನಲಿ ಪರಮಾತ್ಮನೆಸೆದನು ಭ್ರಾಂತಿಯೋಗದಲಿ ೨೩
ಮುಕುಳಕರಪುಟನಾಗಿ ಭಯಭರ
ಭಕುತಿಯಲಿ ಕಲಿಪಾರ್ಥನಬುಜಾಂ
ಬಕನನೆಬ್ಬಿಸಲಮ್ಮದೊಯ್ಯನೆ ಚರಣ ಸೀಮೆಯಲಿ
ಅಕುಟಿಲನು ಸಾರಿದನು ಬಳಿಕೀ
ವಿಕಳ ದುರ್ಯೋಧನನು ನಿಗಮ
ಪ್ರಕರ ಮೌಳಿಯ ಮೌಳಿಯತ್ತಲು ಸಾರ್ದು ಮಂಡಿಸಿದ ೨೪
ಇರಲು ನಿಮಿಷದೊಳಸುರರಿಪು ಮೈ
ಮುರಿದನುಪ್ಪವಡಿಸಿದನಿದಿರಲಿ
ಸುರಪತಿಯ ಸೂನುವನು ಕಂಡನು ನಗೆಯ ಮೊನೆ ಮಿನುಗೆ
ತಿರುಗಿ ನೋಡುತ ತಲೆಯ ದೆಸೆಯಲಿ
ಕುರುಕುಲೇಶನನತಿ ವಿಕಾರತೆ
ಯಿರವ ಕಂಡನಿದೇನಿದೇನೆಂದಸುರರಿಪು ನುಡಿದ ೨೫
ವೀಳಯವ ತಾ ಕೊಂಡು ಕುರು ಭೂ
ಪಾಲ ಪಾರ್ಥರಿಗಿತ್ತು ಲಕ್ಷ್ಮೀ
ಲೋಲ ನುಡಿದನು ಉಭಯರಾಯರಿಗಿತ್ತ ಬರವೇನು
ಹೇಳಿರೈ ಬರವಘಟಿತವಲಾ
ಮೇಳವೇ ಕಡು ಮಾನ್ಯರೆಮ್ಮೀ
ಯಾಲಯಕೆ ಬರಲೇನೆನಲು ಕುರು ರಾಯನಿಂತೆಂದ ೨೬
ಯಾದವರು ಕೌರವರೊಳುಂಟೇ
ಭೇದವಾವಯಿತಂದರೆಮ್ಮೊಳ
ಗಾದ ಲಾಘವವೇನು ನಿಮ್ಮವೊಲಾರು ಸಖರೆಮಗೆ
ಸೋದರರ ಮನ ಕದಡಿದವು ದಾ
ಯಾದ ವಿಷಯದಲಿನ್ನು ಧರಣಿಗೆ
ಕಾದುವೆವು ನಮ್ಮಿಬ್ಬರಿಗೆ ಬಲವಾಗಬೇಕೆಂದ ೨೭
ಕೌರವೇಶ್ವರ ಕೇಳು ಧರಣೀ
ನಾರಿಯನಿಬರಿಗೊಕ್ಕತನವಿ
ದ್ದಾರ ಮೆಚ್ಚಿದಳಾರ ಸಂಗಡವುರಿಯ ಹಾಯಿದಳು
ಭೂರಿ ಮಮಕಾರದಲಿ ನೃಪರು ವಿ
ಚಾರಿಸದೆ ಧರೆಯೆಮ್ಮದೆಂದೇ
ನಾರಕದ ಸಾಮ್ರಾಜ್ಯಕೈದುವರೆಂದು ಹರಿ ನುಡಿದ ೨೮
ನಾಡಿಗೋಸುಗ ಸೋದರರು ಹೊ
ಯ್ದಾಡಿ ಹಱಿಹಂಚಾದರೆಂಬುದ
ನಾಡದಿಹುದೇ ಲೋಕ ಕಮಲಜನುಸಿರಿಹನ್ನೆಬರ
ಬೇಡಕಟ ನಿಮ್ಮೊಳಗೆ ನೀವ್ ಕೈ
ಗೂಡಿ ಬದುಕುವುದೊಳ್ಳಿತಾವ್ ನೆಱೆ
ನೋಡಿ ಸಂತಸಬಡುವೆವೆಂದನು ರುಕ್ಮಿಣೀರಮಣ ೨೯
ತಗರೆರಡ ಖತಿಗೊಳಿಸಿ ಬಲುಗಾ
ಳಗವ ನೋಡುವರಂತೆ ನಿಮ್ಮನು
ತೆಗೆತೆಗೆದು ಕಲಿಮಾಡಿ ಬಿಡುವರು ಖುಲ್ಲರಾದವರು
ನಗುತ ಹೆಱೆಹಿಂಗುವರು ಪಿಸುಣರು
ಬಗುಳಿದವದಿರು ಬಳಿಕ ಕಡೆಯಲಿ
ಹೊಗುವಿರೈ ನೀವಿಬ್ಬರಪಕೀರಿತಿಯ ಹಾದರಕೆ ೩೦
ಅವಧರಿಸು ಮುರವೈರಿ ಧರ್ಮ
ಶ್ರವಣಕೋಸುಗ ಬಾರೆವಾವ್ ಪಾ
ರ್ಥಿವರ ಪಂಥದ ಕದನ ವಿದ್ಯಾಕಾಮವೆಮಗಾಯ್ತು
ನಿವಗೆ ನಾವಿತ್ತಂಡ ಸರಿ ಪಾಂ
ಡವರಿಗೆಯು ಮನದೊಲವಿನಲಿ ಕೌ
ರವರಿಗೆಯು ಬಲವಾಗಬೇಕೆಂದನು ಸುಯೋಧನನು ೩೧
ಎನಲು ತಂಬುಲ ಸೂಸೆ ನಗುತ
ರ್ಜುನನ ನೋಡಿದನಸುರರಿಪು ನಿ
ನ್ನನುವ ಹೇಳೈ ಪಾರ್ಥಯೆನೆ ತಲೆವಾಗಿ ಕೈಮುಗಿದು
ಎನಗೆ ಮತ ಬೇಱೇನು ದುರಿಯೋ
ಧನನ ಮತವೇ ನನ್ನ ಮತ ನಿ
ಮ್ಮನುನಯವೆ ನಯವೆಮ್ಮೊಳೀ ಸ್ವಾತಂತ್ರ್ಯವಿಲ್ಲೆಂದ ೩೨
ಆದಡಾವಿಹೆವೊಂದು ಕಡೆಯಲಿ
ಕಾದುವವರಾವಲ್ಲ ಬಲನೊಳು
ಯಾದವರು ಕೃತವರ್ಮ ನಾರಾಯಣ ಮಹಾಸೇನೆ
ಕಾದುವವರಿವರೊಂದು ದೆಸೆಯೆರ
ಡಾದುದಿವಱೊಳು ಮೆಚ್ಚಿದುದ ನೀ
ನಾದರಿಸಿ ವರಿಸೆಂದು ಪಾರ್ಥಂಗಸುರರಿಪು ನುಡಿದ ೩೩
ಮುರಮಥನ ಚಿತ್ತೈಸು ಕೌರವ
ರರಸನತಿ ಸಿರಿವಂತನಿದ ಸಂ
ತರಿಸಲಾಪನು ಬಹಳ ಯಾದವ ಸೈನ್ಯಸಾಗರವ
ಧರೆಯ ಸಂಪದವಿಲ್ಲದಡವಿಯ
ತಿರುಕರಾವಿನಿಬರನು ಸಲೆ ಸಂ
ತರಿಸಲಾಪೆವೆ ಕೃಷ್ಣ ನೀನೇ ಸಾಕು ನಮಗೆಂದ ೩೪
ನಾವು ಬಡವರು ಬಡವರಿಗೆ ದಿಟ
ನೀವೆ ಬೆಂಬಲವೆಂಬ ಬಿರುದನು
ದೇವ ಕೇಳಿದು ಬಲ್ಲೆವೆಂದನು ಪಾರ್ಥ ಕೈಮುಗಿದು
ನೀವು ಸುಖದಲಿ ಪಾಂಡವರನು
ಜ್ಜೀವಿಸುವುದೆಮಗುಳಿದ ಯದು ಭೂ
ಪಾವಳಿಯ ಕೃಪೆ ಮಾಡಬೇಕೆಂದನು ಸುಯೋಧನನು ೩೫
ಮಱೆಯ ಮಾತುಗಳೇಕೆ ಪಾಂಡವ
ರೆರಕ ನಿಮ್ಮಲಿ ಹಿರಿದು ಪಾರ್ಥಗೆ
ಮರುಗುವಿರಿ ಹಿರಿದಾಗಿ ಮನಮೆಚ್ಚುಂಟು ನಿಮ್ಮೊಳಗೆ
ಉರುವ ಕಾರ್ಯಕೆ ಕಡೆಯಲಾವೇ
ಹೊರಗು ಸಾಕಂತಿರಲಿ ನೀವ್ ಹೊ
ಕ್ಕಿಱಿಯಲಾಗದು ಕೃಷ್ಣಯೆಂದನು ಕೌರವರ ರಾಯ ೩೬
ಮೊಲೆಯನುಂಬಂದೊಬ್ಬ ದನುಜೆಯ
ಹಿಳಿದೆವೊದೆದೆವು ಶಕಟನನು ತನು
ಗಳೆದೆ ಧೇನುಕವತ್ಸ ನಗ ಹಯ ವೃಷಭ ಭುಜಗರನು
ಬಲುಗಜವ ಮಲ್ಲರನು ಮಾವನ
ನೆಳೆದು ಮಾಗಧ ಬಲವ ಬಱಿಕೈ
ದಳಿಸಿದೆವು ದಾನವರ ಹಿಂಡಿದೆವಾಹವಾಗ್ರದಲಿ ೩೭
ಕಾಲಯವನನ ದಂತವಕ್ರನ
ಸೀಳಿದೆವು ಮುರ ನರಕ ಕುಂಭನ
ಸಾಲುವನ ಪೌಂಡ್ರಕನ ಡಿಬಿಕನ ಹಂಸಬಕರುಗಳ
ಕಾಳಗದೊಳಿಟ್ಟೊರಸಿ ಬಾಣನ
ತೋಳ ತಱಿವಂದಾಯ್ತು ಧಾಳಾ
ಧೂಳಿಯಾಹವವಿಂದುಮೌಳಿಯೊಳೆಮಗೆ ಮುಳಿಸಿನಲಿ ೩೮
ಹಸುಳೆತನ ಮೊದಲಾಗಿ ಬಲು ರ
ಕ್ಕಸರೊಡನೆ ತಲೆಯೊತ್ತಿ ರಣದಾ
ಯಸವ ಸೈರಿಸಿ ಹೊಯ್ದು ಕೊಂದೆವು ಕೋಟಿ ದಾನವರ
ಮಿಸುಕಲಾಱೆವು ಚಕ್ರ ಭಂಡಾ
ರಿಸಿತು ಮುನ್ನಿನ ಜವ್ವನದ ಬಲ
ಮುಸುಳಿತಾವುಂಡಾಡಿ ಭಟ್ಟರು ನೃಪತಿ ಕೇಳೆಂದ ೩೯
ಎನಲು ಖರೆ ಲೇಸೆಂದು ದುರಿಯೋ
ಧನನು ಕಳುಹಿಸಿಕೊಂಡು ಬಲರಾ
ಮನನು ಕೃತವರ್ಮನನು ಕಂಡನು ನಿಖಿಳ ಯಾದವರ
ವಿನುತಬಲ ಸಹಿತೊಲವಿನಲಿ ಹ
ಸ್ತಿನಪುರಿಗೆ ಹಾಯಿದನು ಬಳಿಕೀ
ದನುಜರಿಪು ನಸು ನಗುತಲಿಂತೆಂದನು ಧನಂಜಯಗೆ ೪೦
ಸುರಗಿಯನು ಬಿಸುಟೊಱೆಯನಂಗೀ
ಕರಿಸಿದಂದದಲಾಹವದ ಧುರ
ಭರದ ಯಾದವ ಬಲವನೊಲ್ಲದೆ ಮಂದ ಮತಿಯಾಗಿ
ಮರುಳೆ ಕಾದದ ಕಟ್ಟದೆಮ್ಮನು
ಬಱಿದೆ ಬಯಸಿದೆಯಿದನು ಕೇಳ್ದೊಡೆ
ಮರುಳುಗುಟ್ಟದೆ ಮಾಣ್ಬರೇ ನಿಮ್ಮಣ್ಣ ತಮ್ಮದಿರು ೪೧
ಎನಲು ಗಹಗಹಿಸಿದನಿದಾರಿಗೆ
ಮನವ ಕದ್ದಾಡುವಿರಿ ನಿಜ ಶಿ
ಷ್ಯನಲಿ ನಾಟಕದಿಂದ್ರಜಾಲವೆ ನಿಮ್ಮ ಗರುಡಿಯಲಿ
ಎನಗೆ ಶ್ರಮವುಂಟದು ನಿಲಲಿ ಯೆ
ನ್ನನುಜರಗ್ರಜರಱಿಯರೇ ನಿ
ಮ್ಮನುಪಮಿತ ಮಹಿಮಾವಲಂಬವನೆಂದನಾ ಪಾರ್ಥ ೪೨
ನಾವು ಬಱಿಗೈಯವರು ಬರಲೆಮ
ಗಾವುದಲ್ಲಿಯ ಕೆಲಸ ಉಂಡುಂ
ಡಾವು ಕುಳ್ಳಿಹರಲ್ಲ ಹಂಗಾಗಿರೆವು ಕದನದಲಿ
ದೇವನೆಂದೇ ನೀವು ಬಗೆವಿರಿ
ದೇವತನ ನಮ್ಮಲ್ಲಿ ಲವವಿ
ಲ್ಲಾವು ಬಲ್ಲೆವು ಬಂದು ಮಾಡುವದೇನು ಹೇಳೆಂದ ೪೩
ದೇವ ಮಾತ್ರವೆ ನೀವು ದೇವರ
ದೇವರೊಡೆಯರು ಹೊಗಳುವರೆ ವೇ
ದಾವಳಿಗಳಳವಲ್ಲ ಸಾಕಾ ಮಾತದಂತಿರಲಿ
ನಾವು ಭಕುತರು ಭಕುತ ಭೃತ್ಯರು
ನೀವು ಸಾರಥಿಯಾಗಿ ಭೃತ್ಯನ
ಕಾವುದೆಂದರ್ಜುನನು ಹಣೆ ಚಾಚಿದನು ಹರಿಪದಕೆ ೪೪
ಎನಲು ನಗುತೆತ್ತಿದನು ಸಾರಥಿ
ತನವ ಕೈಕೊಂಡನು ಕೃಪಾಳುವಿ
ನನುನಯವ ನಾನೆತ್ತ ಬಲ್ಲೆನು ಭೃತ್ಯವರ್ಗದಲಿ
ತನಗಹಂಕೃತಿಯಿಲ್ಲ ವೈರೋ
ಚನಿಯ ಪಡಿಹಾಱಿಕೆ ಕಿರೀಟಿಯ
ಮನೆಯ ಬಂಡಿಯ ಬೋವನಾದನು ವೀರನಾರಯಣ ೪೫
ಅಂತು ಸಂಧಿ ೧ಕ್ಕಂ ಪದ ೪೫ಕ್ಕಂ ಮಂಗಳಮಸ್ತು
Tuesday, 1 March 2022
|| Naṭarājāṣṭakam || नटराजाष्टकम् ||
॥ नटराजाष्टकम् ॥
कुञ्जरचर्मकृताम्बरमम्बुरुहासनमाधवगेयगुणं
शङ्करमन्तकमानहरं
स्मरदाहकलोचनमेणधरम् ।
साञ्जलियोगिपतञ्जलिसन्नुतमिन्दुकलाधरमब्जमुखं
मञ्जुलशिञ्जितरञ्जितकुञ्चितवामपदं
भज नृत्यपतिम् ॥1
पिङ्गलतुङ्गजटावलिभासुरगङ्गममङ्गलनाशकरं
पुङ्गववाहमुमाङ्गधरं
रिपुभङ्गकरं सुरलोकनतम् ।
भृङ्गविनीलगलं गणनाथसुतं
भज मानस पापहरं
मङ्गलदं वररङ्गपतिं
भवसङ्गहरं धनराजसखम् ॥2
पाणिनिसूत्रविनिर्मितिकारणपाणिलसड्डमरूत्थरवं
माधवनादितमर्दलनिर्गतनादलयोद्धृतवामपदम्
।
सर्वजगत्प्रलयप्रभुवह्निविराजितपाणिमुमालसितं
पन्नगभूषणमुन्नतसन्नुतमानम
मानस साम्बशिवम् ॥3
चण्डगुणान्वितमण्डलखण्डनपण्डितमिन्दुकलाकलितं
दण्डधरान्तकदण्डकरं
वरताण्डवमण्डितहेमसभम् ।
अण्डकराण्डजवाहसखं नम
पाण्डवमध्यममोदकरं
कुण्डलशोभितगण्डतलं
मुनिवृन्दनुतं सकलाण्डधरम् ॥4
व्याघ्रपदानतमुग्रतरासुरविग्रहमर्दिपदाम्बुरुहं
शक्रमुखामरवर्गमनोहरनृत्यकरं
श्रुतिनुत्यगुणम् ।
व्यग्रतरङ्गितदेवधुनीधृतगर्वहरायतकेशचयं
भार्गवरावणपूजितमीशमुमारमणं
भज शूलधरम् ॥5
आसुरशक्तिविनाशकरं
बहुभासुरकायमनङ्गरिपुं
भूसुरसेवितपादसरोरुहमीश्वमक्षरमुक्षधृतम्
।
भास्करशीतकराक्षमनातुरमाश्वरविन्दपदं
भज तं
नश्वरसंसृतिमोहविनाशमहस्करदन्तनिपातकरम्
॥6
भूतिकरं सितभूतिधरं
गतनीतिहरं वरगीतिनुतं
भक्तियुतोत्तममुक्तिकरं
समशक्तियुतं शुभभुक्तिकरम् ।
भद्रकरोत्तमनामयुतं
श्रुतिसामनुतं नम सोमधरं
स्तुत्यगुणं भज
नित्यमगाधभवाम्बुधितारकनृत्यपतिम् ॥7
शूलधरं भवजालहरं
निटिलाग्निधरं जटिलं धवलं
नीलगलोज्वलमङ्गलसद्गिरिराजसुतामृदुपाणितलम्
।
शैलकुलाधिपमौलिनतं
छलहीनमुपैमि कपालधरं
कालविषाशमनन्तमिलानुतमद्भुतलास्यकरं
गिरिशम् ॥8
चित्तहरातुलनृत्तपतिप्रियवृत्तकृतोत्तमगीतिमिमां
प्रातरुमापतिसन्निधिगो
यदि गायति भक्तियुतो मनसि ।
सर्वसुखं भुवि तस्य
भवत्यमराधिपदुर्लभमत्यधिकं
नास्ति पुनर्जनिरेति च
धाम स शाम्भवमुत्तममोदकरम् ॥9
|| Naṭarājāṣṭakam ||
kuñjaracarmakṛtāmbaramamburuhāsanamādhavageyaguṇaṃ
śaṅkaramantakamānaharaṃ smaradāhakalocanameṇadharam |
sāñjaliyogipatañjalisannutamindukalādharamabjamukhaṃ
mañjulaśiñjitarañjitakuñcitavāmapadaṃ bhaja nṛtyapatim ||1
piṅgalatuṅgajaṭāvalibhāsuragaṅgamamaṅgalanāśakaraṃ
puṅgavavāhamumāṅgadharaṃ ripubhaṅgakaraṃ suralokanatam |
bhṛṅgavinīlagalaṃ gaṇanāthasutaṃ bhaja mānasa pāpaharaṃ
maṅgaladaṃ vararaṅgapatiṃ bhavasaṅgaharaṃ dhanarājasakham
||2
pāṇinisūtravinirmitikāraṇapāṇilasaḍḍamarūttharavaṃ
mādhavanāditamardalanirgatanādalayoddhṛtavāmapadam |
sarvajagatpralayaprabhuvahnivirājitapāṇimumālasitaṃ
pannagabhūṣaṇamunnatasannutamānama mānasa sāmbaśivam ||3
caṇḍaguṇānvitamaṇḍalakhaṇḍanapaṇḍitamindukalākalitaṃ
daṇḍadharāntakadaṇḍakaraṃ varatāṇḍavamaṇḍitahemasabham |
aṇḍakarāṇḍajavāhasakhaṃ nama pāṇḍavamadhyamamodakaraṃ
kuṇḍalaśobhitagaṇḍatalaṃ munivṛndanutaṃ sakalāṇḍadharam ||4
vyāghrapadānatamugratarāsuravigrahamardipadāmburuhaṃ
śakramukhāmaravargamanoharanṛtyakaraṃ śrutinutyaguṇam |
vyagrataraṅgitadevadhunīdhṛtagarvaharāyatakeśacayaṃ
bhārgavarāvaṇapūjitamīśamumāramaṇaṃ bhaja śūladharam ||5
āsuraśaktivināśakaraṃ bahubhāsurakāyamanaṅgaripuṃ
bhūsurasevitapādasaroruhamīśvamakṣaramukṣadhṛtam |
bhāskaraśītakarākṣamanāturamāśvaravindapadaṃ bhaja taṃ
naśvarasaṃsṛtimohavināśamahaskaradantanipātakaram ||6
bhūtikaraṃ sitabhūtidharaṃ gatanītiharaṃ varagītinutaṃ
bhaktiyutottamamuktikaraṃ samaśaktiyutaṃ śubhabhuktikaram |
bhadrakarottamanāmayutaṃ śrutisāmanutaṃ nama somadharaṃ
stutyaguṇaṃ bhaja nityamagādhabhavāmbudhitārakanṛtyapatim
||7
śūladharaṃ bhavajālaharaṃ niṭilāgnidharaṃ jaṭilaṃ dhavalaṃ
nīlagalojvalamaṅgalasadgirirājasutāmṛdupāṇitalam |
śailakulādhipamaulinataṃ chalahīnamupaimi kapāladharaṃ
kālaviṣāśamanantamilānutamadbhutalāsyakaraṃ giriśam ||8
cittaharātulanṛttapatipriyavṛttakṛtottamagītimimāṃ
prātarumāpatisannidhigo yadi gāyati bhaktiyuto manasi |
sarvasukhaṃ bhuvi tasya bhavatyamarādhipadurlabhamatyadhikaṃ
nāsti punarjanireti ca dhāma sa śāmbhavamuttamamodakaram ||9
Sunday, 27 February 2022
Sri Chamundeshwari Ashtottara Shatanamavali
Atha śrī cāmuṇḍāmbāṣṭottaraśatanāmāvaliḥ
1. śrī cāmuṇḍāyai namaḥ
2. śrī mahāmāyāyai namaḥ
3. śrīmatsiṃhāsaneśvaryai namaḥ
4. śrīvidyāvedyamahimāyai namaḥ
5. śrīcakrapuravāsinyai namaḥ
6. śrīkaṇṭhadayitāyai namaḥ
7. Gauryai namaḥ
8. Girijāyai namaḥ
9. Bhuvaneśvaryai namaḥ
10. Mahākālyai namaḥ
11. Mahālkṣmyai namaḥ
12. Māhāvāṇyai namaḥ
13. Manonmaṇyai namaḥ
14. Sahasraśīrṣasaṃyuktāyai namaḥ
15. Sahasrakaramaṇḍitāyai namaḥ
16. Kausuṃbhavasanopetāyai namaḥ
17. Ratnakañcukadhāriṇyai namaḥ
18. Gaṇeśaskandajananyai namaḥ
19. Japākusumabhāsurāyai namaḥ
20. Umāyai namaḥ
21. Kātyāyinyai namaḥ
22. Durgāyai namaḥ
23. Mantriṇyai namaḥ
24. Daṇḍinyai namaḥ
25. Jayāyai namaḥ
26. Karāṅgulinakhotpannanārāyaṇadaśākṛtaye namaḥ
27. Sacāmararamāvāṇīsavyadakṣiṇasevitāyai namaḥ
28. Indrākṣyai namaḥ
29. Bagalāyai namaḥ
30. Bālāyai namaḥ
31. Cakreśyai namaḥ
32. Vijayāmbikāyai namaḥ
33. Pañcapretāsanārūḍhāyai namaḥ
34. Haridrākuṅkumapriyāyai namaḥ
35. Mahābalādrinilayāyai namaḥ
36. Mahiṣāsuramardinyai namaḥ
37. Madhukaiṭabhasaṃhartryai namaḥ
38. Madhurāpuranāyikāyai namaḥ
39. Kāmeśvaryai namaḥ
40. Yoganidrāyai namaḥ
41. Bhavānyai namaḥ
42. Caṇḍikāyai namaḥ
43. Satyai namaḥ
44. Cakrarājarathārūḍhāyai namaḥ
45. Sṛṣṭisthityantakāriṇyai namaḥ
46. Annapūrṇāyai namaḥ
47. Jvalaḥjihvāyai namaḥ
48. Kālarātrisvarūpiṇyai namaḥ
49. Niśuṃbhaśuṃbhadamanyai namaḥ
50. Raktabījaniṣūdinyai namaḥ
51. Brāhmyādimātṛkārūpāyai namaḥ
52. śubhāyai namaḥ
53. ṣaṭcakradevatāyai namaḥ
54. Mūlaprakṛtirūpāyai namaḥ
55. āryāyai namaḥ
56. Pārvatyai namaḥ
57. Parameśvaryai namaḥ
58. Bindupīṭhakṛtāvāsāyai namaḥ
59. Candramaṇḍalamadhyakāyai namaḥ
60. Cidagnikuṇḍasaṃbhūtāyai namaḥ
61. Vindhyācalanivāsinyai namaḥ
62. Hayagrīvāgastyapūjyāyai namaḥ
63. Sūryacandrāgnilocanāyai namaḥ
64. Jālandharasupīṭhasthāyai namaḥ
65. śivāyai namaḥ
66. Dākṣāyaṇyai namaḥ
67. īśvaryai namaḥ
68. Navāvaraṇasampūjyāyai namaḥ
69. Navākṣaramanustutāyai namaḥ
70. Navalāvaṇyarūpāḍyāyai namaḥ
71. Dvātriṃśatjvalatāyudhāyai namaḥ
72. Kāmeśabaddhamāṅgalyāyai namaḥ
73. Candrarekhāvibhūṣitāyai namaḥ
74. Carācarajagadrūpāyai namaḥ
75. Nityaklinnāyai namaḥ
76. Aparājitāyai namaḥ
77. Oḍyānnapīṭhanilayāyai namaḥ
78. Lalitāyai namaḥ
79. Viṣṇusodaryai namaḥ
80. Daṃṣṭrākarālavadanāyai namaḥ
81. Vajreśyai namaḥ
82. Vahnivāsinyai namaḥ
83. Sarvamaṅgalarūpāḍyāyai namaḥ
84. Saccidānandavigrahāyai namaḥ
85. Aṣṭādaśasupīṭhasthāyai namaḥ
86. Bheruṇḍāyai namaḥ
87. Bhairavyai namaḥ
88. Parāyai namaḥ
89. Ruṇḍamālālasatkaṇṭhāyai namaḥ
90. Bhaṇḍāsuravimardhinyai namaḥ
91. Puṇḍrekṣukāṇḍakodaṇḍāyai namaḥ
92. Puṣpabāṇalasatkarāyai namaḥ
93. śivadūtyai namaḥ
94. Vedamātre namaḥ
95. śāṅkaryai namaḥ
96. Siṃhavāhinyai namaḥ
97. Catuḥṣaṣṭyūpacārāḍyāyai namaḥ
98. Yoginīgaṇasevitāyai namaḥ
99. Vanadurgāyai namaḥ
100. Bhadrakālyai namaḥ
101. Kadambavanavāsinyai namaḥ
102. Caṇḍamuṇḍaśiraḥchetryai namaḥ
103. Mahārājñyai namaḥ
104. Sudhāmayyai namaḥ
105. śrīcakravaratāṭaṅkāyai namaḥ
106. śrīśailabhramarāmbikāyai namaḥ
107. śrīrājarājavaradāyai namaḥ
108. śrīmattripurasundaryai namaḥ
Iti śrī cāmuṇḍāmbāṣṭottaraśatanāmāvaliḥ sampūrṇā
The above text is according to the Devatādhyānamālikā of Mummaḍi Kṛṣṇarāja Oḍeyar
Saturday, 26 February 2022
Durga Stotra from Virataparvan
ವಿರಾಟಪರ್ವಮ್
ಅಷ್ಟಮೋಧ್ಯಾಯಃ
ದುರ್ಗಾಸ್ತೋತ್ರಮ್
(ವಿರಾಟನಗರಂ ಗಚ್ಛತಾ
ಯುಧಿಷ್ಠಿರೇಣ ದುರ್ಗಾಯಾಃ ಸ್ತವನಂ)
Goddess Chamundeshwari
Painting by Mysore Siddalingaswamy
ವೈಶಂಪಾಯನ ಉವಾಚ ॥
ವಿರಾಟನಗರಂ ರಂಯಂ ಗಚ್ಛಮಾನೋ
ಯುಧಿಷ್ಠಿರಃ।
ಅಸ್ತುವನ್ಮನಸಾ ದೇವೀಂ ದುರ್ಗಾಂ
ತ್ರಿಭುವನೇಶ್ವರೀಮ್ ॥ 1 ॥
ಯಶೋದಾಗರ್ಭಸಂಭೂತಾಂ
ನಾರಾಯಣವರಪ್ರಿಯಾಮ್ ।
ನಂದಗೋಪಕುಲೇ ಜಾತಾಂ ಮಂಗಲ್ಯಾಂ
ಕುಲವರ್ಧನೀಮ್ ॥ 2 ॥
ಕಂಸವಿದ್ರಾವಣಕರೀಮಸುರಾಣಾಂ
ಕ್ಷಯಂಕರೀಮ್।
ಶಿಲಾತಟವಿನಿಕ್ಷಿಪ್ತಾಮಾಕಾಶಂ
ಪ್ರತಿ ಗಾಮಿನೀಮ್ ॥ 3 ॥
ವಾಸುದೇವಸ್ಯ ಭಗಿನೀಂ
ದಿವ್ಯಮಾಲ್ಯವಿಭೂಷಿತಾಮ್।
ದಿವ್ಯಾಂಬರಧರಾಂ ದೇವೀಂ
ಖಂಗಖೇಟಕಧಾರಿಣೀಮ್ ॥ 4 ॥
ಭಾರಾವತರಣೇ ಪುಣ್ಯೇ ಯೇ
ಸ್ಮರಂತಿ ಸದಾ ಶಿವಾಮ್ ।
ತಾನ್ವೈ ತಾರಯತೇ ಪಾಪಾತ್ಪಂಕೇ
ಗಾಮಿವ ದುರ್ಬಲಾಂಮ್ ॥ 5 ॥
ಸ್ತೋತುಂ ಪ್ರಚಕ್ರಮೇ ಭೂಯೋ
ವಿವಿಧೈಃ ಸ್ತೋತ್ರಸಂಭವೈಃ ।
ಆಮಂತ್ರ್ಯ ದರ್ಶನಾಕಾಂಕ್ಷೀ
ರಾಜಾ ದೇವೀಂ ಸಹಾನುಜಃ ॥ 6 ॥
ನಮೋಸ್ತು ವರದೇ ಕೃಷ್ಣೇ ಕುಮಾರಿ
ಬ್ರಹ್ಮಚಾರಿಣಿ ।
ಬಾಲಾರ್ಕಸದೃಶಾಕಾರೇ
ಪೂರ್ಣಚಂದ್ರನಿಭಾನನೇ ॥ 7 ॥
ಚತುರ್ಭುಜೇ ಚತುರ್ವಕ್ರೇ
ಪೀನಶ್ರೋಣಿಪಯೋಧರೇ।
ಮಯೂರಪಿಚ್ಛವಲಯೇ
ಕೇಯೂರಾಂಗದಧಾರಿಣಿ ॥ 8 ॥
ಭಾಸಿ ದೇವಿ ಯಥಾ ಪದ್ಮಾ
ನಾರಾಯಣಪರಿಗ್ರಹಃ ।
ಸ್ವರೂಪಂ ಬ್ರಹ್ಮಚರ್ಯಂ ಚ
ವಿಶದಂ ತವ ಖೇಚರಿ ॥ 9 ॥
ಕೃಷ್ಣಚ್ಛವಿಸಮಾ ಕೃಷ್ಣಾ
ಸಂಕರ್ಷಣಸಮಾನನಾ ।
ಬಿಭ್ರತೀ ವಿಪುಲೌ ಬಾಹು
ಶಕ್ರಧ್ವಜಸಮುಚ್ಛ್ರಯೌ ॥ 10 ॥
ಪಾತ್ರೀ ಚ ಪಂಕಜೀ ಘಂಟೀ ಸ್ತ್ರೀ ವಿಶುದ್ಧಾ ಚ ಯಾ ಭುವಿ
।
ಪಾಶಂ ಧನುರ್ಮಹಾಚಕ್ರಂ
ವಿವಿಧಾನ್ಯಾಯುಧಾನಿ ಚ ॥ 11 ॥
ಕುಂಡಲಾಭ್ಯಾಂ ಸುಪೂರ್ಣಾಭ್ಯಾಂ
ಕರ್ಣಾಭ್ಯಾಂ ಚ ವಿಭೂಷಿತಾ ।
ಚಂದ್ರವಿಸ್ಪರ್ಧಿನಾ ದೇವಿ
ಮುಖೇನ ತ್ವಂ ವಿರಾಜಸೇ ॥ 12 ॥
ಮುಕುಟೇನ ವಿಚಿತ್ರೇಣ ಕೇಶಬಂಧೇನ
ಶೋಭಿನಾ।
ಭುಜಂಗಾಭೋಗವಾಸೇನ
ಶ್ರೋಣಿಸೂತ್ರೇಣ ರಾಜತಾ ॥ 13 ॥
ವಿಭ್ರಾಜಸೇ ಚಾಽಽಬದ್ಧೇನ
ಭೋಗೇನೇವೇಹ ಮಂದರಃ।
ಧ್ವಜೇನ
ಶಿಖಿಪಿಚ್ಛಾನಾಮುಚ್ಛ್ರಿತೇನ ವಿರಾಜಸೇ ॥ 14 ॥
ಕೌಮಾರಂ ವ್ರತಮಾಸ್ಥಾಯ
ತ್ರಿದಿವಂ ಪಾವಿತಂ ತ್ವಯಾ।
ತೇನ ತ್ವಂ ಸ್ತೂಯಸೇ ದೇವಿ
ತ್ರಿದಶೈಃ ಪೂಜ್ಯಸೇಽಪಿ ಚ ॥ 15 ॥
ತ್ರೈಲೋಕ್ಯರಕ್ಷಣಾರ್ಥಾಯ
ಮಹಿಷಾಸುರನಾಶಿನಿ ।
ಪ್ರಸನ್ನಾ ಮೇ ಸುರಶ್ರೇಷ್ಠೇ
ದಯಾಂ ಕುರು ಶಿವಾ ಭವ ॥ 16 ॥
ಜಯಾ ತ್ವಂ ವಿಜಯಾ ಚೈವ
ಸಂಗ್ರಾಮೇ ಚ ಜಯಪ್ರದಾ।
ಮಮಾಪಿ ವಿಜಯಂ ದೇಹಿ ವರದಾ ತ್ವಂ
ಚ ಸಾಂಪ್ರತಮ್ ॥ 17 ॥
ವಿಂಧ್ಯೇ ಚೈವ ನಗಶ್ರೇಷ್ಠೇ ತವ
ಸ್ಥಾನಂ ಹಿ ಶಾಶ್ವತಮ್।
ಕಾಲಿ ಕಾಲಿ ಮಹಾಕಾಲಿ
ಶೀಧುಮಾಂಸಪಶುಪ್ರಿಯೇ ॥ 18 ॥
ಕೃತಾನುಯಾತ್ರಾ ಭೂತೈಸ್ತ್ವಂ ವರದಾ
ಕಾಮಚಾರಿಣೀ।
ಭಾರಾವತಾರೇ ಯೇ ಚ ತ್ವಾಂ
ಸಂಸ್ಮರಿಷ್ಯಂತಿ ಮಾನವಾಃ ॥ 19 ॥
ಪ್ರಣಮಂತಿ ಚ ಯೇ ತ್ವಾಂ ಹಿ
ಪ್ರಭಾತೇ ತು ನರಾ ಭುವಿ ।
ನ ತೇಷಾಂ ದುರ್ಲಭಂ
ಕಿಂಚಿತ್ಪುತ್ರತೋ ಧನತೋಪಿ ವಾ ॥ 20 ॥
ದುರ್ಗಾತ್ತಾರಯಸೇ ದುರ್ಗೇ
ತತ್ತ್ವಂ ದುರ್ಗಾ ಸ್ಮೃತಾ ಜನೈಃ ।
ಕಾಂತಾರೇಷ್ವವಸನ್ನಾನಾಂ
ಮಗ್ರಾನಾಂ ಚ ಮಹಾರ್ಣವೇ।
ದಸ್ಯುಭಿರ್ವಾ ನಿರುದ್ಧಾನಾಂ
ತ್ವಂ ಗತಿಃ ಪರಮಾ ನೃಣಾಮ್ ॥ 21 ॥
ಜಲಪ್ರತರಣೇ ಚೈವ
ಕಾಂತಾರೇಷ್ವಟವೀಷು ಚ।
ಯೇ ಸ್ಮರಂತಿ ಮಹಾದೇವಿ ನ ಚ
ಸೀದಂತಿ ತೇ ನರಾಃ ॥ 22 ॥
ತ್ವಂ ಕೀರ್ತಿಃ ಶ್ರೀರ್ಧೃತಿಃ ಸಿದ್ಧಿರ್ಹ್ರೀರ್ವಿದ್ಯಾ
ಸಂತತಿರ್ಮತಿಃ।
ಸಂಧ್ಯಾ ರಾತ್ರಿಃ ಪ್ರಭಾ ನಿದ್ರಾ
ಜ್ಯೋತ್ಸ್ನಾ ಕಾಂತಿಃಕ್ಷಮಾದಯಾ ॥ 23 ॥
ನೃಣಾಂ ಚ ಬಂಧನಂ ಮೋಹಂ ಪುತ್ರನಾಶಂ ಧನಕ್ಷಯಮ್।
ವ್ಯಾಧಿಂ ಮೃತ್ಯುಂ ಭಯಂ ಚೈವ
ಪೂಜಿತಾ ನಾಶಯಿಷ್ಯಸಿ ॥ 24 ॥
ಸೋಹಂ ರಾಜ್ಯಾತ್ಪರಿಭ್ರಷ್ಟಃ
ಶರಣಂ ತ್ವಾಂ ಪ್ರಪನ್ನವಾನ್ ।
ಪ್ರಣತಶ್ಚ ಯಥಾ ಮೂರ್ಧ್ನಾ ತವ
ದೇವಿ ಸುರೇಶ್ವರಿ ॥ 25 ॥
ತ್ರಾಹಿ ಮಾಂ ಪದ್ಮಪತ್ರಾಕ್ಷಿ
ಸತ್ಯೇ ಸತ್ಯಾ ಭವಸ್ವ ನಃ।
ಶರಣಂ ಭವ ಮೇ ದುರ್ಗೇ ಶರಣ್ಯೇ
ಭಕ್ತವತ್ಸಲೇ ॥ 26 ॥
ಏವಂ ಸ್ತುತಾ ಹಿ ಸಾ ದೇವೀ
ದರ್ಶಯಾಮಾಸ ಪಾಂಡವಮ್ ।
ಉಪಗಂಯ ತು ರಾಜಾನಮಿದಂ
ವಚನಮಬ್ರವೀತ್ ॥ 27 ॥
ದೇವ್ಯುವಾಚ ॥
ಶೃಣು ರಾಜನ್ಮಹಾಬಾಹೋ ಮದೀಯಂ
ವಚನಂ ಪ್ರಭೋ।
ಭವಿಷ್ಯತ್ಯಚಿರಾದೇವ ಸಂಗ್ರಾಮೇ
ವಿಜಯಸ್ತವ ॥ 28 ॥
ಮಮ ಪ್ರಸಾದಾನ್ನಿರ್ಜಿತ್ಯ
ಹತ್ವಾ ಕೌರವವಾಹಿನೀಮ್ ।
ರಾಜ್ಯಂ ನಿಷ್ಕಂಟಕಂ ಕೃತ್ವಾ
ಭೋಕ್ಷ್ಯಸೇ ಮೇದಿನೀಂ ಪುನಃ ॥ 29 ॥
ಭ್ರಾತೃಭಿಃ ಸಹಿತೋ
ರಾಜನ್ಪ್ರೀತಿಂ ಪ್ರಾಪ್ಸ್ಯಸಿ ಪುಷ್ಕಲಾಮ್ ।
ಮತ್ಪ್ರಸಾದಾಚ್ಚ ತೇ
ಸೌಖ್ಯಮಾರೋಗ್ಯಂ ಚ ಭವಿಷ್ಯತಿ ॥ 30 ॥
ಯೇ ಚ ಸಂಕೀರ್ತಯಿಷ್ಯಂತಿ ಲೋಕೇ
ವಿಗತಕಲ್ಮಷಾಃ।
ತೇಷಾಂ ತುಷ್ಟಾ ಪ್ರದಾಸ್ಯಾಮಿ
ರಾಜ್ಯಮಾಯುರ್ವಪುಃ ಸುತಮ್ ॥ 31 ॥
ಪ್ರವಾಸೇ ನಗರೇ ವಾಽಪಿ
ಸಂಗ್ರಾಮೇ ಶತ್ರುಸಂಕಟೇ ।
ಅಟವ್ಯಾಂ ದುರ್ಗಕಾಂತಾರೇ ಸಾಗರೇ
ಗಹನೇ ಗಿರೌ ॥ 32 ॥
ಯೇ ಸ್ಮರಿಷ್ಯಂತಿ ಮಾಂ
ರಾಜನ್ಯಥಾಽಹಂ ಭವತಾ ಸ್ಮೃತಾ ।
ನ ತೇಷಾಂ ದುರ್ಲಭಂ
ಕಿಂಚಿದಸ್ಮಿನ್ ಲೋಕೇ ಭವಿಷ್ಯತಿ ॥ 33 ॥
ಇದಂ ಸ್ತೋತ್ರವರಂ ಭಕ್ತ್ಯಾ
ಶೃಣುಯಾದ್ವಾ ಪಠೇತ ವಾ।
ತಸ್ಯ ಸರ್ವಾಣಿ ಕಾರ್ಯಾಣಿ
ಸಿದ್ಧಿಂ ಯಾಸ್ಯಂತಿ ಪಾಂಡವಾಃ ॥ 34 ॥
ಮತ್ಪ್ರಸಾದಾಚ್ಚ ವಃ
ಸರ್ವಾನ್ವಿರಾಟನಗರೇ ಸ್ಥಿತಾನ್ ।
ನ ಪ್ರಜ್ಞಾಸ್ಯಂತಿ ಕುರಕೋ ನರಾ
ವಾ ತನ್ನಿವಾಸಿನಃ ॥ 35 ॥
ಇತ್ಯುಕ್ತ್ವಾ ವರದಾ ದೇವೀ
ಯುಧಿಷ್ಠಿರಮರಿಂದಮಮ್।
ರಕ್ಷಾಂ ಕೃತ್ವಾ ಚ ಪಾಂಡೂನಾಂ
ತತ್ರೈವಾಂತರಧೀಯತ ॥ 36 ॥
ಇತಿ ಶ್ರೀಮನ್ಮಹಾಭಾರತೇ
ವಿರಾಟಪರ್ವಣಿ ಪಾಂಡವಪ್ರವೇಶಪರ್ವಣಿ ಅಷ್ಟಮೋಽಧ್ಯಾಯಃ ॥ 8 ॥
The above text is based on the Kumbhakonam Edition of
Mahabharata Edited by T.R.Krishnacharya and T.R.Vyasacharya, Proprietors
Of the Madhva vilas Book Depot, Kumbhakonam. Printed By B.R.Ghanekar for
the proprietors, at Tukaram Javji Nirnayasagar Press, Mumbai, 1909.
Mysore — The Fairy Tale I Walked Into
M ysore — The Fairy Tale I Walked Into. By Srinidhi Ramachandra The morning sun glowed softly upon the fi...
-
M ysore — The Fairy Tale I Walked Into. By Srinidhi Ramachandra The morning sun glowed softly upon the fi...
-
ಪೀಠಿಕೆ ಇಲ್ಲಿ ಆಶ್ರಯಿಸಿರುವ ಕುಮಾರವ್ಯಾಸಭಾರತದ ಪಾಠವು ಹಿಂದೆ ಅಚ್ಚಾದ ಪೇಟೆಮುದ್ರಣದ ಪಾಠವಾಗಿದೆ. ಇದಕ್ಕೆ ಶಕಟರೇಫವನ್ನು ಅಳವಡಿಸಲಾಗಿದೆ. ಅಚ್ಚಿನ ತಪ್ಪುಗಳನ್ನು ತಿದ...





