Thursday, 21 October 2021

ನಮ್ಮ ಪ್ರಭುವರ್ಯರ ಶುಭ ಸಂದೇಶ

 ಶ್ರೀಮನ್ಮಹಾರಾಜ ಶ್ರೀಜಯಚಾಮರಾಜೇಂದ್ರ ಒಡೆಯರ್  ಮಹಾಪ್ರಭುಗಳವರು ತಮ್ಮ ಪಟ್ಟಾಭೀಷೇಕ ಸಂದರ್ಭದಲ್ಲಿ ದಯಪಾಲಿಸಿದ ಶುಭ ಸಂದೇಶ 

ಚಿತ್ರ: ಅನ್ತರ್ಜಾಲದಿಂದ ಆಯ್ದದ್ದು

ನಮ್ಮ ಪ್ರಭುವರ್ಯರ ಶುಭ ಸಂದೇಶ 

      " ನಾನು ನನ್ನ ಹಿರಿಯರ ಸಿಂಹಾಸನವನ್ನೇರುವ ಈ ವ್ರತಸಮಾರಂಭವನ್ನು, ನನ್ನನ್ನೂ, ನನ್ನ ಜೀವಮಾನವನ್ನೂ, ನನ್ನ ಸಕಲ ಸರ್ವಸ್ವವನ್ನೂ ಮೈಸೂರು ಸಂಸ್ಥಾನದ ಜನರ ಸೇವೆಗಾಗಿ ಸಮರ್ಪಣ ದೀಕ್ಷೆಯೆಂಬುದಾಗಿ ಎಣಿಸುತ್ತೇನೆ. ಇದರಲ್ಲಿ ನನ್ನೊಬ್ಬನ ಪ್ರಯತ್ನವೊಂದೇ ಜಯಶಾಲಿಯಾಗಲಾರದೆಂದು ನಾನು ಚೆನ್ನಾಗಿ ಅರಿತಿದ್ದೇನೆ. ನಿಮ್ಮ ನೆರವು, ನಿಮ್ಮ ಸಹಕಾರ, ನಿಮ್ಮ ನಂಬಿಕೆ, ನಿಮ್ಮ ಪ್ರೇಮ ಇವೆಲ್ಲವೂ ನನಗೆ ಬೇಕು. 

  ನನ್ನ ವಶಕ್ಕೆ ಒಪ್ಪಿಸಿರುವ ಪವಿತ್ರ ಕರ್ತವ್ಯದ ನಿರ್ವಹಣೆಯಲ್ಲಿ ತೇಜಸ್ಸನ್ನೂ ಶಕ್ತಿಯನ್ನೂ ಭಗವಂತನು ನನಗೆ ಅನುಗ್ರಹಿಸಲಿ; ಮತ್ತು ಆತನ ವರಪ್ರಸಾದಗಳು ಯಥೇಷ್ಟವಾಗಿ ಮೈಸೂರು ಸಂಸ್ಥಾನದ ಪ್ರತಿ ಮನೆ ಮನೆಯಲ್ಲಿಯೂ ಹೊಕ್ಕು ನೆಲಸಿ ಹೊಳೆದು ಬೆಳಗಲಿ"

[ಸುಬೋಧ ಎಂ ರಾಮರಾಯರು ರಚಿಸಿರುವ ಮೈಸೂರಿನ ರಾಜಲಕ್ಷ್ಮಿಯರು (ದ್ವಿತೀಯ ಮುದ್ರಣ ೧೯೪೨) ಪುಸ್ತಕದ 116 ನೆಯ ಪುಟ]


॥ಚಿರಮಭಿವರ್ಧತಾಂ ಯದುಕುಲಸನ್ತಾನಶ್ರೀಃ ॥

2 comments:

Mysore — The Fairy Tale I Walked Into

M ysore — The Fairy Tale I Walked Into.                                  By Srinidhi Ramachandra   The morning sun glowed softly upon the fi...