Wednesday, 27 October 2021

ಶ್ರೀ ಗಣೇಶಾಕ್ಷರಮಾಲಿಕಾ ಸ್ತೋತ್ರ


🌼ಶ್ರೀ ಗಣೇಶ ಅಕ್ಷರಮಾಲಿಕಾ ಸ್ತೋತ್ರ🌼

ಅನುಪಮ ಮಹಿಮಾ ಸಾರ ಗಣೇಶ 
ಆದಿಪೂಜ್ಯನುತ ದೇವ  ಗಣೇಶ 
ಇಷ್ಟಫಲಪ್ರದ ಸುಮುಖ  ಗಣೇಶ 
ಈಶತನಯ ಮಹನೀಯ ಗಣೇಶ 
ಉರಗವಿಭೂಷಣ  ವಿಭವ ಗಣೇಶ 
ಊರ್ಜಿತ ದನುಜನಿಪಾತ ಗಣೇಶ 
ಋಷಿಗಣ ವಂದಿತ ವರದ ಗಣೇಶ 
ೠಕಾರಪ್ರಿಯ ಪೊರೆವ ಗಣೇಶ 
ಎಡರುಗಳನು ತೊರೆದಿಡುವ ಗಣೇಶ 
ಏಕದಂತ ನಿತ್ಯಾತ್ಮ ಗಣೇಶ
 ಐಕಮತ್ಯ ನಿಕ್ಷೇಪ ಗಣೇಶ 
ಒಲಿಯುತ ಭಕ್ತರ ಪೊರೆವ ಗಣೇಶ 
ಓಂಕಾರಾತ್ಮಕ ದೇವ ಗಣೇಶ 
ಔಪಾಸಕರಭಿಮಾನಿ ಗಣೇಶ 
ಅಂಬಾಪ್ರಿಯತನುಜಾತ ಗಣೇಶ 
ಆಹವಶತ್ರುವಿನಾಶ ಗಣೇಶ 
ಕರುಣಾಕರ ಕಮನೀಯ ಗಣೇಶ 
ಖೇಚರಗಾನಾನಂದ ಗಣೇಶ 
ಗಜಮುಖ ನಾಮದಿ ಮೆರೆವ ಗಣೇಶ 
ಘಾತುಕದುರ್ಜನಭಂಗ ಗಣೇಶ 
ಜ್ಞಾನೋದ್ಭವ ಲಿಂಗೈಕ್ಯ ಗಣೇಶ 
ಚಂದ್ರಗರ್ವವಿಧ್ವಂಸ ಗಣೇಶ 
ಛತ್ರಾಲಂಕೃತ ಚೆಲುವ ಗಣೇಶ 
ಜನನ ಮರಣ ಭಯ ರಹಿತ ಗಣೇಶ 
ಝೇಂಕೃತಿ ಕಿಂಕಿಣಿ ಯಾಂತ ಗಣೇಶ 
ಜ್ಞಾನಗಮ್ಯ ಸರ್ವಜ್ಞ ಗಣೇಶ 
ಟಂಕಾರೋದ್ಭವ ವಿಕಟ ಗಣೇಶ 
ಠಂಕಪಾಶಧರ ಜಠರ ಗಣೇಶ 
ಡಮರುಗಹಸ್ತ ಸುಪುತ್ರ ಗಣೇಶ 
ಢಕ್ಕಾವಾದನಲೋಲ ಗಣೇಶ 
ಣತಪರಿಪಾಲನ ನಿಪುಣ ಗಣೇಶ 
ತತ್ವಜ್ಞಾನಾನಂದ ಗಣೇಶ 
ಥಳಥಳಿಸುವ ಮಣಿಮಕುಟ ಗಣೇಶ 
ದಾಕ್ಷಾಯಿಣಿ ಸುತ ವಿನುತ  ಗಣೇಶ 
ಧನದ ಪ್ರಿಯ ಮಹಿಮಾತ್ಮ ಗಣೇಶ 
ನಾಗಪಾಶಧರ ಕಪಿಲ ಗಣೇಶ 
ಪಶುಪತಿಗತಿಶಯ ಕುವರ ಗಣೇಶ 
ಫಾಲಚಂದ್ರಧರ ದೇವ ಗಣೇಶ 
ಬ್ರಹ್ಮಚರ್ಯವ್ರತನಿಷ್ಠ ಗಣೇಶ 
ಭವಭಯನಾಶಕ ದೇವ ಗಣೇಶ 
ಮಹಿಮಾನ್ವಿತ ಸುಚರಿತ್ರ ಗಣೇಶ 
ಯದುಕುಲನಂದನವಂದ್ಯ ಗಣೇಶ 
ರಾಘುಪತಿಪೂಜಿತಚರಣ ಗಣೇಶ 
ಲಾಲಿಸಿ ಭಕ್ತರ ಪೊರೆವ ಗಣೇಶ 
ವರದಾಭಯಕರ ದೇವ  ಗಣೇಶ 
ಶಾಂತಿದಾಂತಿಸಂಪನ್ನ ಗಣೇಶ 
ಷಣ್ಮುಖಸೋದರ ಸಿದ್ಧಿ ಗಣೇಶ 
ಸಕಲಾಗಮಪರಿಪೂರ್ಣ ಗಣೇಶ
ಹರಿಹರವಿಧಿನುತ ಮೂರ್ತಿ ಗಣೇಶ 
ಳಕ್ಷಣಗುಣಸಂಯುಕ್ತ ಗಣೇಶ 
ಕ್ಷೇತ್ರಪಾಲ ಸುಪ್ರೀತ ಗಣೇಶ 
ಜಯಜಯ ಮಂಗಲ ದೇವ ಗಣೇಶ
ಜಯಜಯ ಮಂಗಲ ವರದ ಗಣೇಶ 

( ಭಾಮಿನೀಷಟ್ಪದಿ ಪದ್ಯ)
ಗಜವದನ ಹೇರಂಬ ಗಣಪತಿ ।
ಭುಜಗಭೂಷಣ ವಿಘ್ನಮದಸಾ
ಮಜಕೆ ಪಂಚಾನನ ಮಹೇಶ್ವರಪುತ್ರ ಶುಭಗಾತ್ರ ।। ಸುಜನಪಾಲಕ ವರವಿನಾಯಕ।
ಭಜಿಸಿ ಪೂಜಿಸಿ ನಮಿಸಿ ನುತಿಸುವೆ ।
ನಿಜಮತಿಯ ಕೊಟ್ಟೊಲಿದು ರಕ್ಷಿಸು ನಮ್ಮನನವರತ ।।

ಶ್ರೀಗಣೇಶಾಕ್ಷರಮಾಲಿಕಾ ಸಂಪೂರ್ಣಾ

No comments:

Post a Comment

Mysore — The Fairy Tale I Walked Into

M ysore — The Fairy Tale I Walked Into.                                  By Srinidhi Ramachandra   The morning sun glowed softly upon the fi...