Tuesday, 2 November 2021

ಕಾಯೌ ಶ್ರೀಗೌರಿ ಕರುಣಾಲಹರಿ

                                                        ಕಾಯೌ ಶ್ರೀಗೌರಿ ಕರುಣಾಲಹರಿ 

ರಚನೆ: ಅಭಿನವ ಕಾಳಿದಾಸ ಶ್ರೀ ಬಸವಪ್ಪ ಶಾಸ್ತ್ರೀ




(ಶ್ರೀಚಾಮುಂಡೇಶ್ವರಿ ಅಮ್ಮನವರ ಚಿತ್ರ- ಮೈಸೂರು ಸಿದ್ಧಲಿಂಗಸ್ವಾಮಿಗಳವರ ಚಿತ್ರಕಲೆ)

 

ಕಾಯೌ ಶ್ರೀಗೌರಿ ಕರುಣಾಲಹರಿ 

ತೋಯಜಾಕ್ಷಿ ಶಂಕರೀಶ್ವರಿ  ॥ಪ॥


ವೈಮಾನಿಕ ಭಾಮಾರ್ಚಿತ ಕೋಮಲಕರಪಾದೇ 

ಸೀಮಾತಿಗ( ಶ್ರೀಮಾನ್ವಿತ?) ಭೂಮಾಸ್ಪದೆ ಕಾಮಿತಫಲದೇ 


ಶುಂಭಾದಿಮದಾಂಭೋನಿಧಿ ಕುಂಭಜನಿಭದೇವಿ

ಜಂಭಾಹಿತ ಸಂಭಾವಿತೆ ಶಾಂಭವಿ ಶುಭವೀ


(ಚಾಮಾರಾಜೇಂದ್ರ ಒಡೆಯರ ಕಾಲದಲ್ಲಿ)

ಶ್ಯಾಮಾಲಿಕೆ ಚಾಮುಂಡಿಕೆ ಸೋಮಕುಲಜ ಚಾಮ

ನಾಮಾಂಕಿತ ಭೂಮೀಂದ್ರ ಲಲಾಮನ ಮುದದೇ (ಮುದದಿ?)


(ನಾಲ್ವಡಿ ಕೃಷ್ಣರಾಜರ ಕಾಲದಲ್ಲಿ)

ಶ್ಯಾಮಾಲಿಕೆ ಚಾಮುಂಡಿಕೆ ಸೋಮಕುಲಜ ಕೃಷ್ಣ

ನಾಮಾಂಕಿತ ಭೂಮೀಂದ್ರ ಲಲಾಮನ ಮುದದೇ (ಮುದದಿ?)


(ಜಯಚಾಮರಾಜರ ಕಾಲದಲ್ಲಿ)

ಶ್ರೀಜಯಚಾಮುಂಡಿಕೆ ಶ್ರೀಜಯಚಾಮೇಂದ್ರ-

ನಾಮಾಂಕಿತ ಭೂಮೀಂದ್ರ ಲಲಾಮನ ಮುದದೇ (ಮುದದಿ?)

(ಬಸವಪ್ಪ ಶಾಸ್ತ್ರಿಗಳು)

 ॥ಚಿರಮಭಿವರ್ಧತಾಂ ಯದುಸನ್ತಾನಶ್ರೀಃ ॥





No comments:

Post a Comment

Mysore — The Fairy Tale I Walked Into

M ysore — The Fairy Tale I Walked Into.                                  By Srinidhi Ramachandra   The morning sun glowed softly upon the fi...